ಅಮೀರ್ ಖುಸ್ರು
	ಹಿಂದೂಸ್ಥಾನದ ಗಿಣಿ, ಕವಿರಾಜ ಮುಂತಾದ ಬಿರುದುಗಳಿಂದ ಪ್ರಸಿದ್ಧನಾದ ಈತ (1253-1325) ಬಲ್ಬನ್ನನ ಮಗನಾದ ಮಹಮ್ಮದನಿಗೆ ಗುರುವಾಗಿಯೂ ಅನಂತರ ದೆಹಲಿಯಲ್ಲಿ ಗ್ರಂಥಪಾಲಕನಾಗಿಯೂ ಪ್ರಸಿದ್ಧನಾಗಿದ್ದ. ಸಂಗೀತ, ತತ್ತ್ವಶಾಸ್ತ್ರ ಮುಂತಾದುವುಗಳಲ್ಲಿ ಪರಿಣತ. ಪ್ರಸಿದ್ಧ ಪಾರಸಿ ಕವಿ ಮತ್ತು ಚರಿತ್ರಕಾರ. ಅಲ್ಲಾವುದ್ದೀನನ ದಕ್ಷಿಣಾಪಥದ ಯುದ್ಧಗಳಲ್ಲಿ ಅವನ ಸಂಗಡಿಗನಾಗಿದ್ದು ಖಜೈನ್-ಉಲ್-ಪುತುಹ್ ಎಂಬ ಅಧಿಕೃತಚರಿತ್ರೆಯನ್ನು ರಚಿಸಿದ. ಇವನ ಇನ್ನೊಂದು ಕೃತಿ ದೇವಲ್ ರಾಣಿ-ವ-ಖಿಸ್ರ್‍ಖಾನ್. ಇದೊಂದು ಸುಂದರ ಶೈಲಿಯ ಕಾವ್ಯ. ಈ ಎರಡು ಕೃತಿಗಳೂ ಮಧ್ಯಕಾಲೀನ ಭಾರತಚರಿತ್ರೆಗೆ ಮುಖ್ಯ ಮಾಹಿತಿಗಳಾಗಿವೆ.												
(ಎಂ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ